ಹೊಸಪೇಟೆ :ವಿಜಯನಗರ, ಜಾಗೃತಿ ಬೆಳಕು ನ್ಯೂಸ್
ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ,ಹೊಸಪೇಟೆಯಲ್ಲಿ ಒಂದು ವಾರದ ಸೀರತ್ ಅಭಿಯಾನ,
ಸೀರತ್ ಅಭಿಯಾನದ ಪ್ರಯುಕ್ತ ಹೊಸಪೇಟೆಯ ಶಾಸಕರ ಗೃಹ ಕಛೇರಿಯಲ್ಲಿ ಎಚ್. ಆರ್. ಗವಿಯಪ್ಪ, ಶಾಸಕರು ಹೊಸಪೇಟೆ, ವಿಜಯನಗರ ಕ್ಷೇತ್ರ ಅವರನ್ನು ಭೇಟಿಯಾಗಿ ಶಾಂತಿ ಪ್ರಕಾಶನ ವತಿಯಿಂದ ಪ್ರಕಟಗೊಂಡ ಹೊಸ ಕೃತಿ *ಪ್ರವಾದಿ ಮುಹಮ್ಮದ್ (ಸ) ಲೇಖನಗಳ ಸಂಕಲನ* ವನ್ನು ಬಿಡುಗಡೆಗೊಳಿಸಲಾಯಿತು, ಮುಹಮ್ಮದ್ ಅಜೀಜ್ ಮುಲ್ಲಾ, ಸ್ಥಾನೀಯ ಅಧ್ಯಕ್ಷರು ಜಮಾಅತೆ ಇಸ್ಲಾಮಿ ಹಿಂದ್, ಹೊಸಪೇಟೆ, ಅಭಿಯಾನದ ಸಂದರ್ಭದಲ್ಲಿ ನಡೆಯುತ್ತಿರುವಂತಹ ಚಟುವಟಿಕೆಗಳನ್ನು ವಿವರಿಸಿದರು. ಕೃತಿಯನ್ನು ಪಡೆದ ಶಾಸಕರು ನೋಡಿ ಅಭಿಯಾನದ ಯಶಸ್ಸಿಗೆ ಶುಭ ಕೋರಿದರು. ಅಭಿಯಾನದ ಅಂಗವಾಗಿ ಇಂದು 02-10-2024 ರಂದು ಸಂಜೆ 5ಗಂಟೆಗೆ *”ಆದರ್ಶ ಸಮಾಜದ ನಿರ್ಮಾಣ, ಶಾಂತಿ ಮತ್ತು ಸೌಹಾರ್ದತೆಯಿಂದ”* ಎಂಬ ವಿಷಯದ ಮೇಲೆ ವಿಚಾರ ಗೋಷ್ಠಿಯನ್ನು ಹೊಸಪೇಟೆಯ ರೊಟರಿ ಕ್ಲಬ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಖ್ಯಾತ ಪ್ರವಚನಕಾರರು ಲಾಲ್ ಹುಸೇನ್ ಕಂದಗಲ್ ಹಾಗೂ ಶಿವಕುಮಾರ ಮಹಾಸ್ವಾಮಿಗಳು, ದುರುದುಂಡೇಶ್ವರ ವಿರಕ್ತ ಮಠ, ಭಾಗವಹಿಸಲಿದ್ದು, ಹೊಸಪೇಟೆಯ ಇತರ ಧರ್ಮಗುರುಗಳು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಸರ್ವ ಧರ್ಮೀಯ ಸ್ತ್ರೀ – ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿ ಎಂದು ಜಮಾಅತ್ ನ ಅಧ್ಯಕ್ಷರು ಕೋರಿದರು.
ವರದಿ :ಮೊಹಮ್ಮದ್ ಗೌಸ್