ಹೊಸಪೇಟೆ -ವಿಜಯನಗರ, ಜಾಗೃತಿ ಬೆಳಕು ನ್ಯೂಸ್
ಖಿದ್ಮತೆ-ಎ-ಮಿಲ್ಲತ್ ಮುಸ್ಲಿಂ ಗೆಳೆಯರ ಬಳಗ ಸೇರಿಕೊಂಡು ತಮ್ಮ ಸ್ವಂತ ಖರ್ಚಿನಿಂದ ಬಡವನಿಗೆ ಮತ್ತು ವೃದ್ಧರಿಗೆ ಅಳಿಲು ಸೇವೆ ಮಾಡುತ್ತಾ ಬಂದಿರುತ್ತಾರೆ
ಗಂಗಾವತಿ ತಾಲೂಕಿನಿoದ ಹತ್ತು ಕಿಲೋ ಮೀಟರ್ ದೂರದಲ್ಲಿರುವ ಕೋರಮ್ಮ ಕ್ಯಾಂಪ್ ಗ್ರಾಮಕ್ಕೆ ಒಂದು ಜನಾಜ ಮತ್ತು ಗುಸುಲ್ಕೊಡುವ ಟೇಬಲ್ಲ ಅವಶ್ಯಕತೆ ಇದೆ ಎಂದು ತಿಳಿದ ತಕ್ಷಣ ಖಿದ್ಮತೆ-ಎ-ಮಿಲ್ಲತ್ ಮುಸ್ಲಿಂ ಗೆಳೆಯರ ಬಳಗ ತಮ್ಮ ಸ್ವಂತ ಖರ್ಚಿನಿಂದ 30,000 ವೆಚ್ಚದಲ್ಲಿ ಉಲುಮಾ -ಎ- ಹೈಲೆ ಸುನ್ನತ್ ಸಮ್ಮುಖದಲ್ಲಿ ಹಾಗೂ Dr.ದರ್ವೇಶ್ ಮೈನುದ್ದೀನ್ ಅಂಜುಮನ್ ಖಿದ್ಮತೆ ಇಸ್ಲಾಂ ಅಧ್ಯಕ್ಷರೂ ಹೊಸಪೇಟೆ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದಂತಹ ಹೆಚ್.ಎನ್. ಮೊಹಮ್ಮದ್ ಇಮಾಮ ನಿಯಾಜಿ ಅವರ ಸಮ್ಮುಖದಲ್ಲಿ ಜನಾಜ ಮತ್ತು ಗುಸುಲ್ಕೊಡುವ ಟೇಬಲ್ಲನ್ನು ಹಸ್ತಾಂತರಿಸುವ ಮೂಲಕ ಅವರ ಸಮಸ್ಯೆಯನ್ನು ಬಗೆಹರಿಸಿದರು.
ಹಲವಾರು ಗ್ರಾಮಗಳಿಗೆ ಸರಿಸುಮಾರು 10 ಕಿಂತ ಹೆಚ್ಚು ಜನಾಜ ಮತ್ತು ಗುಸುಲ್ಕೊಡುವ ಟೇಬಲ್ಲ ಗಳನ್ನು ವಿತರಿಸುವ ಮೂಲಕ ಖಿದ್ಮತೆ-ಎ-ಮಿಲ್ಲತ್ ಎನ್ನುವ ಮುಸ್ಲಿಂ ಗೆಳೆಯರ ಬಳಗ ಜನಸಾಮಾನ್ಯರ ಮಚ್ಚೆಗೆ ಪಾತ್ರರಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡವರು:
ಹಫೀಜ್ ಜಿಲಾನ್ ಬರ್ಕಾತಿ , ಮಹಮ್ಮದ್ ಕೈಪ್,ಖಾಜಾ ಬರ್ಕಾತಿ,
ಶಾಹಿ ಇಮಾಮ್,
ಶಬ್ಬೀರ್ ಭಾಷಾ,ಖಾದರಿ,
ಇರ್ಫಾನ್ ಕೆ.ಕೆ., ಹಾಗೂ ಹಲವು ಮುಖಂಡರ ಸಮ್ಮುಖದಲ್ಲಿ ಖಿದ್ಮತೆ-ಎ-ಮಿಲ್ಲತ್ ವತಿಯಿಂದ ಕೊಡಲಾಯಿತು ಇದೇ ಸಂದರ್ಭದಲ್ಲಿ ಹೆಚ್ಎನ್ಎಫ್ ಇಮಾಮ್ ನಿಯಾಜಿಯವರಿಗೆ ಖಿದ್ಮತೆ-ಎ-ಮಿಲ್ಲತ್ ವತಿಯಿಂದ ಸನ್ಮಾನಿಸಲಾಯಿತು
ವರದಿ : ಮೊಹಮ್ಮದ್ ಗೌಸ್