ಔರದ್
ಬಿ. ಜೆ.ಪಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತ ನೀತಿಯಿಂದ ಪೆಟ್ರೋಲ್, ಡಿಜಲ್, ಅಡುಗೆ ಅನೀಲ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಭಾರತದಲ್ಲಿ 260% ಪ್ರತಿಶತಕ್ಕಿಂತ ಜಾಸ್ತಿ ಕರ ವಸೂಲಿ ಮಾಡುವ ಮೂಲಕ ಸಾಮಾನ್ಯ ವರ್ಗದ ಮೇಲೆ ಬರೆ ಎಳಿದಿದೆ.ಪಂಚರಾಜ್ಯದ ಚುನಾವಣೆ ಮುಕ್ತಾಯದ ನಂತರ ಮಾನ್ಯ ಮೋದಿಯವರ ನಿಜಬಣ್ಣ ಮತ್ತೆ ಬಯಲಾಗಿದೆ. ಎಲ್ಲಿಯವರೆಗೆ ಭಾರತ ಮುಕ್ತ ಭಾಜಪಾ ಸರ್ಕಾರ ಆಗುವುದಿಲ್ಲವೊ ದೇಶದ ಯುವಜನತೆ, ಸಾಮಾನ್ಯ ವರ್ಗವೂ ಪರಿತಪಿಸುವ ಪರಿಸ್ಥಿತಿ ನಿಲ್ಲುವುದಿಲ್ಲ. ಭಾಜಪಾವನ್ನು ಸಂಪೂರ್ಣವಾಗಿ, ಬೇರು ಸಮೇತ ಕಿತ್ತು ಹಾಕುವ ಕೆಲಸ ಮಾಡಿ, ದೇಶವನ್ನು ಇನ್ನೊಮ್ಮೆ ಮನುವಾದಿಗಳಿಂದ,
ಕೋಮುವಾದಿಗಳಿಂದ ಸ್ವಾತಂತ್ರ್ಯ ನೀಡುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಬೇಕಾಗಿದೆ.ಜರ್ಮನಿಯ ಹಿಟ್ಲರ್ ಕೂಡ ಅವನ ದೇಶದ ಜನತೆಯ ಮೇಲೆ ಎಂದಿಗೂ ಭಾರವಾಗಿರಲಿಲ್ಲ, ಬದಲಿಗೆ ದೇಶದ ಜನರಿಗೆ ಔದ್ಯೋಗಿಕರಣ ಮೂಲಕ ಕೆಲಸ ನೀಡಿದ್ದಾರೆ.ಭಾರತ ದೇಶದಲ್ಲಿ ಹುಕುಂಶಾಹಿಯ ವಿರುದ್ಧ #ಹಮ್_ದೊ #ಹಮಾರೆ_ದೊ ನೀತಿಯ ವಿರುದ್ಧ ನಾವೆಲ್ಲಾ ಒಗ್ಗಟ್ಟಾಗಿ ಹೊರಾಡುವ ಬಲ ತೋರಿಸಬೇಕಾಗಿದೆ.ಇಂದು ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಔರಾದ್ ತಾಲೂಕಾ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ರಾಜಕುಮಾರ ಹಲ್ಬುರ್ಗೆ, ಆನಂದ ಚೌಹಾಣ್ ಮತ್ತು ಸ್ಥಳಿಯ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
ವರದಿ..ಸುಧೀರ ಕುಮಾರ್ ಬೀ ಪಾಂಡ್ರೆ