ಹೊಸಪೇಟೆ ನ್ಯೂಸ್ (ಜಾಗೃತಿ ಬೆಳಕು)
ವಿಜಯನಗರ ಕೇಂದ್ರ ಬಿಜೆಪಿಯ ಅಗ್ನಿಪಥ್ ಅನ್ನು ಖಂಡಿಸಿ ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪ್ರತಿಭಟನೆಯಲ್ಲಿ ಹೊಸಪೇಟೆ ಕಾಂಗ್ರೆಸ್ ಮುಖಂಡರಾದ ಶ್ರೀ ಹೆಚ್. ಎನ್. ಎಫ್ ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ‘ಅಗ್ನಿಪಥ’ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಗ್ನಿಪಥ ಯೋಜನೆಯ ವಿರುದ್ಧದ ಪ್ರತಿಭಟನೆಗಳು, ಹಿಂಸಾಚಾರಗಳು ದೇಶದಾದ್ಯಂತ ವ್ಯಾಪಕವಾಗಿ ಆಕ್ರೋಶಗಳು ವ್ಯಕ್ತವಾಗುತ್ತಿದ್ದರೂ ಬಹಳಷ್ಟು ಯುವಜನತೆ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ, ಇಷ್ಟೆಲ್ಲಾ ಅನಾಹುತಗಳು ನಡೆಯುತ್ತಿದ್ದರೂ ಭೀಕರ ನಿರುದ್ಯೊಗದ ದುಷ್ಪರಿಣಾಮಗಳ ಬಗ್ಗೆ ಮುಂದಾಲೋಚನೆ ಇಲ್ಲದೆ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿರುವುದು ಖಂಡನಿಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ.ವಿ ಶಿವಯೋಗಿ ಗುಜ್ಜಲ್ ನಾಗರಾಜ್, ಗುಜ್ಜಲ್ ರಾಘು, ದೀಪಕ ಕುಮಾರ್ ಸಿಂಗ್, ಕುರಿ ಶಿವಮೂರ್ತಿ, ವಿನಯ್ ಶೆಟ್ಟರ್ ಖಾಜಾ ಹುಸ್ಸೇನ್, ಸೇವಾದಳ ಸತ್ಯನಾರಾಯಣ ವೀರಯ್ಯ ಸ್ವಾಮಿ, ವಿನಯ್ ಶೆಟ್ಟರ್ , ಖಾಜಾ ಹುಸೆನ್, ವಿ.ಸೊಮಪ್ಪ , ನಗರ ಸಭೆ ಸದಸ್ಯರಾದ ರಘು, ವೆಂಕಟೇಶ್, ಹುಲುಗಪ್ಪ, ವೆಂಕೋಬಣ್ಣ, ಸತ್ಯ ನಾರಾಯಣಪ್ಪ, ಸೇವಾದಳ ಮಾರೆಣ್ಣ, ನಿಂಗಣ್ಣ ನಾಯಕ, ಆಶಲತಾ, ಮಹಮ್ಮದ್ ಸಾಬ್, ಭರತ್, ಆಲಂ ಬಾಷ, ಬುಡೆನ್, ಬಾಣದ ಗಣೇಶ, ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ :-ಮೊಹಮ್ಮದ್ ಗೌಸ್