ವಿಜಯನಗರ :ಹೊಸಪೇಟೆ -ಜಾಗೃತಿ ಬೆಳಕು ನ್ಯೂಸ್
ವಿಜಯನಗರ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ ಉಪಾಧ್ಯಕ್ಷರು ಹಾಗೂ ವಿಜಯನಗರ ಜಿಲ್ಲಾಧ್ಯಕ್ಷರಾದ ಸಣ್ಣಕ್ಕಿ ಲಕ್ಷ್ಮಣ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ, ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನ ರ್ಯಾಲಿಯನ್ನು ಮಾಡಲಾಯಿತು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದಿಂದ ಫೆ, 08ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 28, ಬೇಡಿಕೆಗಳ ಈಡೇರಿಕೆಗಾಗಿ ಹೋರಾಟವನ್ನು ಮಾಡಲಾಗಿತ್ತು. ನಂತರ ಹೋರಾಟದ ಸ್ಥಳಕ್ಕೆ ಆಗಮಿಸಿದ ಆಗಮಿಸಿದ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ರವರು ನೀವು ಹೋರಾಟ ಮಾಡಬಾರದು ನಾವು ನಿಮ್ಮ ಮಂತ್ರಿ ಹೋರಾಟ ಮಾಡುವ ಅವಶ್ಯಕತೆ ಇಲ್ಲ ನಿಮ್ಮ ಉಪಮುಖ್ಯಮಂತ್ರಿ ಗಳಿದ್ದಾರೆ ಮುಖ್ಯಮಂತ್ರಿಗಳು ಇದ್ದಾರೆ ರಾಜ್ಯ ಸಂಪುಟದಲ್ಲಿ ಶೇಕಡ 50ರಷ್ಟು ತಳಮಟ್ಟದಿಂದ ಬಂದಿರುವಂತವರಿದ್ದಾರೆ ನಿಮ್ಮ ಬೇಡಿಕೆಗಳನ್ನು ಆಲಿಸಲು ನಾವು ಬಂದಿದ್ದೇವೆ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ ನಿಮ್ಮ ಬೇಡಿಕೆಗಳು ಕಾನೂನಿನ ಚೌಕಟ್ಟಿನಲ್ಲಿ ಇಲ್ಲವಾದಲ್ಲಿ ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇವೆ ಎಂದು ತಿಳಿಸಿ ಇಂದಿಗೆ ಎಂಟು ತಿಂಗಳು ಕಳೆದರೂ ಒಂದು ಬೇಡಿಕೆಯನ್ನು ಕೂಡ ಈಡೇರಿಸಿರುವುದಿಲ್ಲ.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ 28 ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸದಿದ್ದಲ್ಲಿ ರಾಜ್ಯದ್ಯಂತ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಮಗಳ ಸಾರ್ವಜನಿಕರೊಂದಿಗೆ ಜನಾಂದೋಲನ ಮಾಡುವ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು
ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು
ಈ ಸಂದರ್ಭದಲ್ಲಿ ತಾಲೂಕಿನ ಅಧ್ಯಕ್ಷರುಗಳಾದ ಏ ಜಂಬಣ್ಣ ಮಮತಾ ತಳವಾರ್ ಮುರಳಿ ರಾಜ್ ಗೋವಿಂದ ನಾಯಕ್ ಕಾರ್ತಿಕ್ ಕಡಬಗೆರೆ ಗಡ್ಡಿ ನಾಗರಾಜ್ ಹಾಗು ರಾಜ್ಯ ಒಕ್ಕೂಟದ ಪದಾಧಿಕಾರಿಗಳಾದ ಶಶಿಕಲಾ ಮತ್ತು ರೇವಣಸಿದ್ದೇಶ್ವರ ಸಿ ರಮೇಶ್ ಗದ್ದಿಕೆರೆ ಸುರೇಶ್ ಹುಲುಗಪ್ಪ ದೂಪದಹಳ್ಳಿ ಮಂಜುನಾಥ್ ತಿಪ್ಪೇಶ್ ನಾಯಕ್ ದಿನೇಶ್ ಶ್ರೀಧರ್ ರೆಡ್ಡಿ ಬಾಬು ಶಂಕರ್ ನಾಯಕ್ ಹನುಮಂತಪ್ಪ ವೆಂಕಟೇಶ್ ಮಲಪನ ಗುಡಿ ಕರಿಯಪ್ಪ ಚನ್ನಬಸಪ್ಪ ಯಮನೂರಪ್ಪ ಎಂ ಲಕ್ಷ್ಮಣ್ ಹಾಗೂ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರುಗಳು ಇನ್ನಿತರರು ಉಪಸ್ಥಿತರಿದ್ದರು
ವರದಿ :ಮೊಹಮ್ಮದ್ ಗೌಸ್