ವಿಜಯನಗರ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ದರ್ಬಾರ್..!!
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹೊಸೂರು ಗ್ರಾಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಲಜೀವನ ಮಿಷಿನ್ ಯೋಜನೆಯನ್ನು ಒತ್ತಾಯಪೂರ್ವಕವಾಗಿ ಅನುಷ್ಠಾನ ಗೊಳಿಸಲು ನಮ್ಮ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ದಿನಾಂಕ 28/01/2022 ರಂದು
ಹೊಸೂರು ಗ್ರಾಮದಲ್ಲಿ ನಿಯಮಾನುಸಾರ ಕ್ರಮ ವಹಿಸಿ ಗ್ರಾಮ ಸಭೆ ನಡೆದಿರುತ್ತದೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಈಗಾಗಲೇ ಅನುಷ್ಠಾನಗೊಳ್ಳಲು ಕೊನೆಯ ಹಂತದಲ್ಲಿದ್ದು ಕಾರಣ ನಮಗೆ ಜಲಜೀವನ ಮಿಷನ್ ಯೋಜನೆ ಬೇಡವೆಂದು ತಿಳಿಸಿರುತ್ತಾರೆ ಈಗಾಗಲೇ ಒಂದು ಯೋಜನೆ ಚಾಲ್ತಿಯಲ್ಲಿ ಇರುವ ಸಮಯದಲ್ಲಿ ಈ ಹೊಸ ಯೋಜನೆ ಯಾಕೆ ಬೇಕು ಎಂದು ಪ್ರಶ್ನಿಸಿರುತ್ತಾರೆ ಮತ್ತು ಸರಕಾರ ನೀಡಿರುವ ಜಲ ಜೀವನ ಮಿಷನ್ ಯೋಜನೆಯ ಮಾರ್ಗದರ್ಶಿ ಕೆಯಲ್ಲಿ ಗ್ರಾಮಸ್ಥರ ತೀರ್ಮಾನವೇ ಅಂತಿಮ ತೀರ್ಮಾನ ಎಂದು ಮಾಹಿತಿ ನೀಡಿದ್ದರು ಸಹ ನಮ್ಮ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ನಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳಿಗೆ ಜಾರಿಮಾಡಲು ಒತ್ತಡ ಹಾಕುತ್ತಿದ್ದಾರೆ ಒಂದು ವೇಳೆ ಈ ಯೋಜನೆಯನ್ನು ಅನುಷ್ಠಾನಗೊಳಿಸದಿದ್ದರೆ ನಮ್ಮ ಗ್ರಾಮ ಪಂಚಾಯಿತಿಯ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಮತ್ತು ಇನ್ನಿತರ ಅನುದಾನಗಳನ್ನು ಇನ್ನು ಮುಂದೆ ಕುಡಿಯುವ ನೀರಿಗೆ ಸಂಬಂಧಪಟ್ಟಂತ ಯಾವುದೇ ಕೆಲಸ ಮಾಡಿದರು ಬಿಲ್ ಆಗುವುದಿಲ್ಲ ಅನುದಾನಗಳನ್ನು
ತಡೆಹಿಡಿಯಲಾಗುವುದು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಹೇಳಿಸುತ್ತಿದ್ದಾರೆ ಈ ಯೋಜನೆಯ ಒಳಗುಟ್ಟು ನಮಗೆ ತಿಳಿಯುತ್ತಿಲ್ಲ ಈಗಾಗಲೇ ಗ್ರಾಮಸ್ಥರು ಗ್ರಾಮಸಭೆಯಲ್ಲಿ ತಿರಸ್ಕರಿಸಿ ಗ್ರಾಮಸಭೆಯ ನಡಾವಳಿ ಮಾಡಿರುವ ದಾಖಲೆಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರು ಸುರಭಿ ಸಮಗ್ರ ಮಾನವ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಕೂಡ್ಲಿಗಿ ಇವರಿಗೆ ಮಾಹಿತಿಗಾಗಿ ತಲುಪಿಸಿದ್ದರು ಕೂಡ ಯೋಜನೆಯ ಕ್ರಿಯಾಯೋಜನೆ ತಯಾರಿಸಲು ಅಧಿಕಾರಿಗಳನ್ನೊಳಗೊಂಡ ತಂಡ ಗ್ರಾಮಗಳಿಗೆ ಭೇಟಿ ನೀಡಿ ಸರ್ವೆ ಮಾಡಲು ಮುಂದಗಿರುತ್ತಾರೆ
ಇವೆಲ್ಲವನ್ನೂ ನೋಡುತ್ತಿದ್ದರೆ ಇಲ್ಲಿ ಗ್ರಾಮಸಭೆಯ ಮತ್ತು ಗ್ರಾಮಸ್ಥರ ತೀರ್ಮಾನಕ್ಕೆ ಬೆಲೆ ಇಲ್ಲದಂತಾಗಿದೆ ಅಧಿಕಾರಿಗಳ ತೀರ್ಮಾನವೇ ಅಂತಿಮ ಎನ್ನುವಂತಾಗಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು
ಸಣ್ಣಕ್ಕಿ ಲಕ್ಷ್ಮಣ್
ಹೊಸೂರು ಗ್ರಾಮ ಪಂಚಾಯಿತಿ ಸದಸ್ಯರು
ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ
ವಿಜಯನಗರ ಜಿಲ್ಲಾ ಅಧ್ಯಕ್ಷರು ಮಾಧ್ಯಮದ ಮುಖಾಂತರ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟರು….. ಇದಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಮಾಧ್ಯಮಕ್ಕೆ ನೀಡಿರುತ್ತಾರೆ….
ವರದಿ :-ಮೊಹಮ್ಮದ್ ಗೌಸ್